ಕರ್ನಾಟಕ ಸರ್ಕಾರ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಬೀದರ್
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೀದರ್
2025-26 ನೇ ಸಾಲಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ
ಸ್ಪರ್ಧಾಳುಗಳಿಗೆ ಷರತ್ತು ಮತ್ತು ನಿಬಂಧನೆಗಳು
ಸದರಿ ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ.
ಸಂಗೀತ, ನೃತ್ಯ ಮತ್ತು ಕಲಾ ಶಿಕ್ಷಕರು ಆಯಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಲ್ಲ.
ದಿನಗೂಲಿ, ಅರೆಕಾಲಿಕ, ಕ್ಷೇಮಾಭಿವೃದ್ಧಿ ಮತ್ತು ಗುತ್ತಿಗೆ ನೌಕರರಿಗೆ ಅವಕಾಶವಿರುವುದಿಲ್ಲ.
ದೈಹಿಕ ಶಿಕ್ಷಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಪೋಲೀಸ್ (ಸಮವಸ್ತ್ರಧಾರಿಗಳು) ಹಾಗೂ ಕ್ರೀಡಾ ಮೀಸಲಾತಿಯಡಿ ಆಯ್ಕೆಯಾದ ನೌಕರರು ಭಾಗವಹಿಸಲು ಅರ್ಹರಲ್ಲ.
ಇಲಾಖೆಯ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ಸೇವಾ ಪ್ರಮಾಣ ಪತ್ರ ಮತ್ತು ವಯಸ್ಸಿನ ದಾಖಲೆ ಕಡ್ಡಾಯ.
ಕ್ರೀಡಾಕೂಟದಂದು ನೇರ ನೋಂದಣಿಗೆ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ.
ಅಥ್ಲೆಟಿಕ್ಸ್ನಲ್ಲಿ ಗರಿಷ್ಠ 3 ವೈಯಕ್ತಿಕ ಮತ್ತು 1 ಗುಂಪು ಆಟದಲ್ಲಿ ಮಾತ್ರ ಭಾಗವಹಿಸಬಹುದು.
ಭಾಗವಹಿಸುವ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಶೇಷ ಸಾಂದರ್ಭಿಕ ರಜೆ (OOD) ಮಂಜೂರು ಮಾಡಲಾಗುವುದು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಫಿಲಂ ಟ್ಯೂನ್ ಅಥವಾ ಪೆನ್ ಡ್ರೈವ್ ಬಳಸಲು ಅವಕಾಶವಿಲ್ಲ.
ಆನ್ಲೈನ್ ಮೂಲಕ ನೋಂದಾಯಿಸಲು ಕೆಳಗಿನ ಬಟನ್ ಕ್ಲಿಕ್ ಮಾಡಿ:
APPLY NOW
ಕೊನೆಯ ದಿನಾಂಕ: 21-01-2026